India Post Recruitment 2025:
ಕರ್ನಾಟಕ ಅಂಚೆ ಇಲಾಖೆ 1135 ಬೃಹತ್ ನೇಮಕಾತಿ 2025 – ಭಾರತೀಯ ಅಂಚೆ ಇಲಾಖೆ ನೇಮಕಾತಿ 2025 – ಸಂಪೂರ್ಣ ಮಾಹಿತಿ
ಹೊಸ ನೇಮಕಾತಿ ಅಧಿಸೂಚನೆ 2025
ಭಾರತೀಯ ಅಂಚೆ ಇಲಾಖೆಯು (India Post) ಕರ್ನಾಟಕ ರಾಜ್ಯದಲ್ಲಿ 21413 ಗ್ರಾಮೀಣ ಡಾಕ್ ಸೇವಕ (Gramin Dak Sevak) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇದರಲ್ಲಿ ಕರ್ನಾಟಕ ಅಂಚೆ ವೃತ್ತದಲ್ಲಿ ಖಾಲಿಯಿರುವ 1135 ಹುದ್ದೆಗಳು ಸೇರಿವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ, ಅಭ್ಯರ್ಥಿಗಳು ಅಗತ್ಯ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ ಮತ್ತು ಇತರೆ ಮಾನದಂಡಗಳನ್ನು ಪರಿಶೀಲಿಸಿಕೊಳ್ಳಬೇಕು. ಕೆಳಗೆ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅಥವಾ ಅಧಿಕೃತ ಅಧಿಸೂಚನೆ (Notification) ಮತ್ತು ಅಧಿಕೃತ ವೆಬ್ಸೈಟ್ (Official Website) ಲಿಂಕ್ ಮೂಲಕ ಹೆಚ್ಚಿನ ವಿವರಗಳನ್ನು ಪಡೆಯಿರಿ.
ಮುಖ್ಯ ಮಾಹಿತಿ:
- ಇಲಾಖೆ ಹೆಸರು: ಭಾರತೀಯ ಅಂಚೆ ಇಲಾಖೆ, ಕರ್ನಾಟಕ
- ಹುದ್ದೆಗಳು: ಗ್ರಾಮೀಣ ಡಾಕ್ ಸೇವಕ (ಬ್ರಾಂಚ್ ಪೋಸ್ಟ್ ಮಾಸ್ಟರ್, ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್)
- ಒಟ್ಟು ಹುದ್ದೆಗಳು: 21413 (ಕರ್ನಾಟಕದಲ್ಲಿ 1135 ಹುದ್ದೆಗಳು)
- ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್
- ಉದ್ಯೋಗ ಸ್ಥಳ: ಭಾರತಾದ್ಯಂತ

India Post Recruitment 2025
ಹುದ್ದೆಗಳ ವಿವರ:
- ಗ್ರಾಮೀಣ ಡಾಕ್ ಸೇವಕ್ (ಬ್ರಾಂಚ್ ಪೋಸ್ಟ್ ಮಾಸ್ಟರ್)
- ಗ್ರಾಮೀಣ ಡಾಕ್ ಸೇವಕ್ (ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್/ಡಾಕ್ ಸೇವಕ್)
ಅರ್ಹತೆ:
- ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು 10ನೇ ತರಗತಿ ಅಥವಾ SSLC ಪಾಸ್ ಆಗಿರಬೇಕು. ಕಂಪ್ಯೂಟರ್ ಮೂಲಭೂತ ಜ್ಞಾನ ಮತ್ತು ಸೈಕ್ಲಿಂಗ್ ಜ್ಞಾನ ಅಗತ್ಯವಿದೆ.
- ವಯೋಮಿತಿ:
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 40 ವರ್ಷ
- ವಯೋಮಿತಿ ಸಡಿಲಿಕೆ:
- OBC ಅಭ್ಯರ್ಥಿಗಳಿಗೆ: 3 ವರ್ಷ
- SC/ST ಅಭ್ಯರ್ಥಿಗಳಿಗೆ: 5 ವರ್ಷ
- PwD ಅಭ್ಯರ್ಥಿಗಳಿಗೆ: 10 ವರ್ಷ
ವೇತನ ಶ್ರೇಣಿ:
- ಬ್ರಾಂಚ್ ಪೋಸ್ಟ್ ಮಾಸ್ಟರ್: ₹12,000 – ₹29,380 ಪ್ರತಿ ತಿಂಗಳು
- ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್/ಡಾಕ್ ಸೇವಕ: ₹10,000 – ₹24,470 ಪ್ರತಿ ತಿಂಗಳು
ಅರ್ಜಿ ಶುಲ್ಕ:
- SC/ST, PwD ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ.
- ಇತರೆ ಅಭ್ಯರ್ಥಿಗಳು: ₹100
- ಪಾವತಿ ವಿಧಾನ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ 10ನೇ ತರಗತಿ/SSLC ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುವುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 10 ಫೆಬ್ರುವರಿ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03 ಮಾರ್ಚ್ 2025
ಪ್ರಮುಖ ಲಿಂಕ್‌ಗಳು:
ಪ್ರಮುಖ ಲಿಂಕುಗಳು | |
---|---|
ನೋಟಿಫಿಕೇಶನ್ | Click Here |
ಅರ್ಜಿ ಲಿಂಕ್ / ವೆಬ್ಸೈಟ್ | Click Here |
ಸೂಚನೆ:
ನಾವು ಒದಗಿಸುವ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ನಿಮ್ಮಿಂದ ಹಣ ಕೇಳಿದರೆ, ತಕ್ಷಣ ನಮ್ಮ ಗಮನಕ್ಕೆ ತರಿ.
ಮುಖ್ಯ ಸೂಚನೆ:
ಅರ್ಜಿ ಸಲ್ಲಿಸುವ ಮುನ್ನ, ಅಧಿಸೂಚನೆಯನ್ನು (Notification) ಸಂಪೂರ್ಣವಾಗಿ ಓದಿ ಮತ್ತು ಅಗತ್ಯ ಮಾಹಿತಿಯನ್ನು ಪರಿಶೀಲಿಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ನಂತರ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಆದ್ದರಿಂದ, ಸಮಯಕ್ಕೆ ಮುಂಚಿತವಾಗಿ ಅರ್ಜಿ ಸಲ್ಲಿಸಿ.