Income Tax Department Recruitment 2025:
ಆದಾಯ ತೆರಿಗೆ ಇಲಾಖೆ ನೇಮಕಾತಿ 2025 – 10ನೇ ಮತ್ತು 12ನೇ ತರಗತಿ ಪಾಸಾದವರಿಗೆ ಉದ್ಯೋಗ ಅವಕಾಶ
ಆದಾಯ ತೆರಿಗೆ ಇಲಾಖೆ (Income Tax Department) ನವೀಕೃತ ನೇಮಕಾತಿ ಅಧಿಸೂಚನೆ 2025 ಪ್ರಕಟಗೊಂಡಿದ್ದು, stenographer, tax assistant ಮತ್ತು Multi-Tasking Staff (MTS) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ವಯೋಮಿತಿ ಮತ್ತು ಇತರ ಶರತ್ತುಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.
ಈ ಅಧಿಸೂಚನೆಯ ಪೂರ್ಣ ವಿವರಗಳನ್ನು ಈ ಲೇಖನದಲ್ಲಿ ತಿಳಿಸಿಕೊಳ್ಳಬಹುದಾಗಿದೆ. ಅಧಿಕೃತ ಅಧಿಸೂಚನೆ ಹಾಗೂ ಅರ್ಜಿಯ ಲಿಂಕ್ ನೀಡಲಾಗಿದ್ದು, ಅದನ್ನು ಓದಿ ಮತ್ತು ಅಧ್ಯಯನ ಮಾಡಿ ನಂತರ ಅರ್ಜಿ ಸಲ್ಲಿಸುವುದು ಉತ್ತಮ.
ಉದ್ಯೋಗದ ವಿವರ:
- ಸಂಸ್ಥೆ: ಆದಾಯ ತೆರಿಗೆ ಇಲಾಖೆ (Income Tax Department)
- ಹುದ್ದೆಗಳ ಸಂಖ್ಯೆ: 56
- ಅರ್ಜಿ ಸಲ್ಲಿಕೆ: ಆನ್‌ಲೈನ್
- ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಹುದ್ದೆಗಳ ಹೆಸರು ಮತ್ತು ವಿವರ:
- ಸ್ಟೆನೋಗ್ರಾಫರ್ ಗ್ರೇಡ್-2: 02 ಹುದ್ದೆಗಳು
- ತೆರಿಗೆ ಸಹಾಯಕ: 28 ಹುದ್ದೆಗಳು
- ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS): 26 ಹುದ್ದೆಗಳು
ವಿದ್ಯಾರ್ಹತೆ:
- ಸ್ಟೆನೋಗ್ರಾಫರ್ ಗ್ರೇಡ್-2: ಕನಿಷ್ಟ 12ನೇ ತರಗತಿ ಪಾಸಾಗಿರಬೇಕು.
- ತೆರಿಗೆ ಸಹಾಯಕ: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವೀಧರರಾಗಿರಬೇಕು.
- ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS): ಕನಿಷ್ಟ 10ನೇ ತರಗತಿ ಪಾಸಾಗಿರಬೇಕು.
ವಯೋಮಿತಿ:
- ಕನಿಷ್ಟ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 27 ವರ್ಷ
ವಯೋಸಡಿಲಿಕೆ:
- ಸಾಮಾನ್ಯ / ಒಬಿಸಿ ಅಭ್ಯರ್ಥಿಗಳು: 05 ವರ್ಷಗಳು
- ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳು: 10 ವರ್ಷಗಳು
ವೇತನ ಶ್ರೇಣಿ:
- ಸ್ಟೆನೋಗ್ರಾಫರ್ ಗ್ರೇಡ್-2: ರೂ. 25,500 – ರೂ. 81,100/-
- ತೆರಿಗೆ ಸಹಾಯಕ: ರೂ. 18,000 – ರೂ. 56,900/-
- ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS): ರೂ. 18,000 – ರೂ. 56,900/-
ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ವಿಧಿಸಲಾಗಿರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ: ಅಭ್ಯರ್ಥಿಗಳು ಮೊದಲಿಗೆ ಲಿಖಿತ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.
- ದಾಖಲೆ ಪರಿಶೀಲನೆ: ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮಾಡಲಾಗುವುದು.
- ವೈದ್ಯಕೀಯ ಪರೀಕ್ಷೆ: ಆಯ್ಕೆಯಾದ ಅಭ್ಯರ್ಥಿಗಳು ವೈದ್ಯಕೀಯ ತಪಾಸಣೆಗೆ ಒಳಪಡಬೇಕಾಗುತ್ತದೆ.
- ಸಂದರ್ಶನ: ಅಂತಿಮವಾಗಿ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು | |
---|---|
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ | 15-ಮಾರ್ಚ್-2025 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 05-ಏಪ್ರಿಲ್-2025 |
ಪ್ರಮುಖ ಲಿಂಕುಗಳು |
ನೋಟಿಫಿಕೇಶನ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
- ಆನ್‌ಲೈನ್ ಅರ್ಜಿಯ ಲಿಂಕ್ ತೆರೆಯಿರಿ.
- ಅಗತ್ಯವಿರುವ ದಾಖಲೆಗಳು ಮತ್ತು ಮಾಹಿತಿಗಳನ್ನು ಭರ್ತಿ ಮಾಡಿ.
- ಅರ್ಜಿಯನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
- ಅರ್ಜಿ ಸಲ್ಲಿಸಿದ ನಂತರ ಪ್ರಿಂಟ್‌ಔಟ್ ತೆಗೆದುಕೊಂಡು ಭವಿಷ್ಯಕ್ಕಾಗಿ ಇಟ್ಟುಕೊಳ್ಳಿ.
ಮುಖ್ಯ ಸೂಚನೆ:
- ನಮ್ಮ ತಂಡ ನೀಡುವ ಎಲ್ಲಾ ಉದ್ಯೋಗ ಮಾಹಿತಿಗಳು ಸಂಪೂರ್ಣ ಉಚಿತವಾಗಿದೆ.
- ಯಾವುದೇ ಹಣ ಪಾವತಿ ಮಾಡಬೇಕಾಗಿಲ್ಲ.
- ಯಾರಾದರೂ ಉದ್ಯೋಗ ಖಾತ್ರಿ ಹೆಸರಿನಲ್ಲಿ ಹಣ ಕೇಳಿದರೆ, ದಯವಿಟ್ಟು ನಮ್ಮ ಗಮನಕ್ಕೆ ತರಲು ಕೋರಲಾಗುತ್ತದೆ.
ಅಭ್ಯರ್ಥಿಗಳು ಈ ಹುದ್ದೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಿ ನಂತರವೇ ಅರ್ಜಿ ಸಲ್ಲಿಸಬೇಕು. ಈ ನೇಮಕಾತಿಯ ಸವಿವರ ಮಾಹಿತಿ ಮತ್ತು ಹೊಸ ಉದ್ಯೋಗ ಸುದ್ದಿಗಳಿಗೆ ನಮ್ಮ ಟೆಲಿಗ್ರಾಂ ಹಾಗೂ ಫೇಸ್ಬುಕ್ ಗ್ರೂಪ್‌ಗಳನ್ನು ಪಾಲುಗೊಳ್ಳಿ.

Income Tax Department Recruitment 2025: