BOB Recruitment 2025:
ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2025 – 500 ಪಿಯೋನ್ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಹೊಸ ನೇಮಕಾತಿ ಪ್ರಕಟಣೆ – 2025
ಬ್ಯಾಂಕ್ ಆಫ್ ಬರೋಡಾ (BOB) ಸಂಸ್ಥೆಯು 2025ರ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಈ ಅಧಿಸೂಚನೆಯ ಮೂಲಕ, ಆಫೀಸ್ ಅಸಿಸ್ಟೆಂಟ್ (ಪಿಯೋನ್) ಹುದ್ದೆಗಳಿಗೆ ಒಟ್ಟು 500 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಪೂರ್ಣವಾಗಿ ಓದಿದ ನಂತರವೇ ಅರ್ಜಿ ಸಲ್ಲಿಸಬೇಕು.
ಹುದ್ದೆಗಳ ವಿವರಗಳು:
- ಹುದ್ದೆ ಹೆಸರು: ಆಫೀಸ್ ಅಸಿಸ್ಟೆಂಟ್ (ಪಿಯೋನ್)
- ಒಟ್ಟು ಹುದ್ದೆಗಳ ಸಂಖ್ಯೆ: 500
- ಉದ್ಯೋಗ ಸ್ಥಳ: ಭಾರತದೆಲ್ಲೆಡೆ
- ವೇತನ ಶ್ರೇಣಿ: ₹19,500/- ರಿಂದ ₹37,815/- ವರೆಗೆ ಪ್ರತಿ ತಿಂಗಳು
ಶೈಕ್ಷಣಿಕ ಅರ್ಹತೆ:
- ಅಭ್ಯರ್ಥಿಗಳು ಕನಿಷ್ಠವಾಗಿ 10ನೇ ತರಗತಿ (SSLC) ಪಾಸಾಗಿರಬೇಕು.
ವಯೋಮಿತಿ (01-ಮೇ-2025
ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 26 ವರ್ಷ
ವಯೋಸಡಿಲಿಕೆ (ಸರಕಾರದ ನಿಯಮಾನುಸಾರ):
- ಒಬಿಸಿ (ನಾನ್-ಕ್ರೀಮಿ ಲೇಯರ್): 3 ವರ್ಷ
- ಎಸ್ಸಿ / ಎಸ್ಟಿ ಅಭ್ಯರ್ಥಿಗಳು: 5 ವರ್ಷ
- ದೈಹಿಕ ಅಂಗವಿಕಲರು: 10 ವರ್ಷ
ಅರ್ಜಿ ಶುಲ್ಕ:
- ಎಸ್ಸಿ / ಎಸ್ಟಿ / ಅಂಗವಿಕಲ / ಮಾಜಿ ಸೇನಾ ಸಿಬ್ಬಂದಿ / ಮಹಿಳಾ ಅಭ್ಯರ್ಥಿಗಳು: ₹100/-
- ಸಾಮಾನ್ಯ / ಇಡಬ್ಲ್ಯುಎಸ್ / ಒಬಿಸಿ ಅಭ್ಯರ್ಥಿಗಳು: ₹600/-
- ಪಾವತಿ ವಿಧಾನ: ಆನ್‌ಲೈನ್ ಮೂಲಕ
ಆಯ್ಕೆ ಪ್ರಕ್ರಿಯೆ:
- ಆನ್‌ಲೈನ್ ಪರೀಕ್ಷೆ
- ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ:
- ಅಧಿಸೂಚನೆ ಓದಿ: ಅಧಿಕೃತ ಅಧಿಸೂಚನೆಯನ್ನು ಓದಿ ಮತ್ತು ಅರ್ಹತೆಗಳ ಪರಿಶೀಲನೆ ಮಾಡಿ.
- ಅರ್ಜಿ ಭರ್ತಿ ಮಾಡಿ: ವೈಯಕ್ತಿಕ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಿ.
- ದಾಖಲೆಗಳು ಅಪ್ಲೋಡ್ ಮಾಡಿ: ವಿದ್ಯಾಭ್ಯಾಸ ಪ್ರಮಾಣಪತ್ರಗಳು, ಪಾಸ್‌ಪೋರ್ಟ್ ಸೈಜ್ ಫೋಟೋ, ಗುರುತಿನ ಚೀಟಿ ಇತ್ಯಾದಿಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿ: ಆಯಾ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
- ಅರ್ಜಿ ಸಲ್ಲಿಸಿ: ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ಅರ್ಜಿ ಸಲ್ಲಿಸಿ. ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಭದ್ರಪಡಿಸಿ.
ಪ್ರಮುಖ ದಿನಾಂಕಗಳು:
- ಅರ್ಜಿ ಪ್ರಾರಂಭ ದಿನಾಂಕ: 03-ಮೇ-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-ಮೇ-2025
ಪ್ರಮುಖ ಲಿಂಕುಗಳು
ನೋಟಿಫಿಕೇಶನ್ (ಅಧಿಸೂಚನೆ): ಇಲ್ಲಿ ಕ್ಲಿಕ್ ಮಾಡಿ
ಆನ್‌ಲೈನ್ ಅರ್ಜಿ ಲಿಂಕ್: ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ:
ನಾವು ನೀಡುವ ಎಲ್ಲಾ ಉದ್ಯೋಗ ಮಾಹಿತಿ ಉಚಿತವಾಗಿದ್ದು, ಯಾವುದೇ ಹಣವನ್ನು ಪಡೆಯುವುದಿಲ್ಲ. ಯಾರಾದರೂ ಉದ್ಯೋಗದ ಹೆಸರಿನಲ್ಲಿ ಹಣ ಕೇಳಿದರೆ, ತಕ್ಷಣವೇ ನಾವು ನೀಡಿರುವ ಇಮೇಲ್ ವಿಳಾಸಕ್ಕೆ ದೂರು ಸಲ್ಲಿಸಿ.
ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಅಹ್ವಾನ – SSLC ಪಾಸ್ ಆದವರಿಗೆ – Sainik School Kodagu Recruitment 2025

BOB Recruitment 2025: